ಪೊಲೀಸ್ ಭವನ ರಾಮನಗರ ಜಿಲ್ಲೆ

ಪೊಲೀಸ್ ಭವನದ ಬಗ್ಗೆ

ರಾಮನಗರ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಚನ್ನಪಟ್ಟಣದಲ್ಲಿ ಕೇಂದ್ರ ಪೊಲೀಸ್ ಕಲ್ಯಾಣ ನಿಧಿಯ ಅನುದಾನದಲ್ಲಿ ಹವಾನಿಯಂತ್ರಿತ ಪೊಲೀಸ್ ಸಮುದಾಯ ಭವನವನ್ನು ನಿರ್ಮಿಸಲಾಗಿದ್ದು, ಉತ್ತಮ ಪಾರ್ಕಿಂಗ್ ಹಾಗೂ ಮೂಲಭೂತ ಸೌಕರ್ಯಗಳನ್ನು ಬಳಗೊಂಡಿರುತ್ತದೆ. ಪೊಲೀಸ್ ಸಮುದಾಯ ಭವನದ ಬಳಕೆಯನ್ನು ಸಾರ್ವಜನಿಕರಿಗೂ ಸೇರಿದಂತೆ ನಿವೃತ್ತ ಹಾಗೂ ಸೇವೆಯಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಬಾಡಿಗೆ ದರವನ್ನು ನಿಗದಿಪಡಿಸಲಾಗಿರುತ್ತದೆ. ಭವನದ ಬಾಡಿಗೆ ಮತ್ತು ಪಾವತಿ ಪ್ರಕ್ರಿಯೆಗಳು ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯಲ್ಲಿದ್ದು ಇಲ್ಲಿ ಅರ್ಜಿಸಲ್ಲಿಸಬಹುದಾಗಿರುತ್ತದೆ.

ಪೊಲೀಸ್ ಅಧೀಕ್ಷಕರು ಮತ್ತು ಅಧ್ಯಕ್ಷರು,
ಪೊಲೀಸ್ ಕಲ್ಯಾಣ ನಿಧಿ ಮತ್ತು ಪೊಲೀಸ್ ಭವನ ಮೂಲಸೌಕರ್ಯ ಸಮಿತಿ, ರಾಮನಗರ ಜಿಲ್ಲೆ.

ಮೂಲಭೂತ ಸೌಕರ್ಯಗಳು

Air Conditioner
ಹವಾ ನಿಯಂತ್ರಣ ವ್ಯವಸ್ಥೆ
Large 4K LED TV
4K ಎಲ್ ಇ ಡಿ ಪರದೆ
Solar Water Heater
ಸೋಲಾರ್ ವಾಟರ್ ಹೀಟರ್
CCTV Camera
ಸಿ ಸಿ ಕ್ಯಾಮೆರಾ ವ್ಯವಸ್ಥೆ
Free Parking
ಉಚಿತ ವಾಹನ ನಿಲುಗಡೆ
Chairs for events
ಸಮಾರಂಭಕ್ಕೆ ಕುರ್ಚಿಗಳು
Kitchen Facility
ಅಡುಗೆಮನೆ ಸೌಲಭ್ಯ
Bathrooms
ಸ್ನಾನದ ಮನೆ
Electric Generator
ಜನರೇಟರ್

ಲಭ್ಯತೆ / Availability

  • Available
  • Unavailable

ಕಾಯ್ದಿರಿಸಿ / Book Now

Booking Form

Deposit Option 25% Per item
Total: 
*Only vegetarian food allowed within the premises / ಭವನದಲ್ಲಿ  ಸಸ್ಯಾಹಾರಿ ಆಹಾರಕ್ಕೆ ಮಾತ್ರ ಅವಕಾಶವಿರುತ್ತದೆ.

Pricing Chart / ದರ ಪಟ್ಟಿ

ಪೂರ್ಣ ದಿನದ ದರ ಪಟ್ಟಿ

Sl No. Details Price AC Charges Electricity Charges (Min.) Cleaning and Maintainance Sub Total Processing Fee Total
1 ಸೇವೆಯಲ್ಲಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿ ಸ್ವಂತಕ್ಕೆ/ಮಕ್ಕಳು ₹15,000 ₹3,500 ₹2,500 ₹3,000 ₹25,000 ₹605 ₹25,605
2 ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಮಕ್ಕಳು/ಮೊಮ್ಮಕ್ಕಳು ₹15,000 ₹3,500 ₹2,500 ₹3,000 ₹25,000 ₹605 ₹25,605
3 ಸೇವೆಯಲ್ಲಿರುವ/ನಿವೃತ್ತ ಪೊಲೀಸ್ ಸಂಬಂಧಿಕರ ಕಾರ್ಯಕ್ರಮಗಳಿಗೆ ( ಮೊದಲ ತಲೆಮಾರಿನ ಸಂಬಂಧಿಕರಿಗೆ ಮಾತ್ರ ಹಾಗೂ ಮೊದಲ ತಲೆಮಾರಿನ ಸಂಬಂಧಿಕರು ಎಂಬ ಬಗ್ಗೆ ಛಾಪಾ ಖಾಗದದಲ್ಲಿ ಧೃಢೀಕರಿಸಿಕೊಡತಕ್ಕದ್ದು) ₹30,000 ₹3,500 ₹2,500 ₹3,000 ₹39,000 ₹943 ₹39,943
4 ಸಾರ್ವಜನಿಕರಿಗೆ ₹35,000 ₹3,500 ₹2,500 ₹3,000 ₹44,000 ₹1,064 ₹45,064

ಅರ್ಧ ದಿನದ ದರ ಪಟ್ಟಿ

Sl No. Details Price AC Charges Electricity Charges (Min.) Cleaning and Maintainance Sub Total Processing Fee Total
1 ಸೇವೆಯಲ್ಲಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿ ಸ್ವಂತಕ್ಕೆ/ಮಕ್ಕಳು ₹10,000 ₹2,500 ₹1,250 ₹1,500 ₹14,750 ₹357 ₹15107
2 ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಮಕ್ಕಳು/ಮೊಮ್ಮಕ್ಕಳು ₹10,000 ₹2,500 ₹1,250 ₹1,500 ₹14,750 ₹357 ₹15107
3 ಸೇವೆಯಲ್ಲಿರುವ/ನಿವೃತ್ತ ಪೊಲೀಸ್ ಸಂಬಂಧಿಕರ ಕಾರ್ಯಕ್ರಮಗಳಿಗೆ ( ಮೊದಲ ತಲೆಮಾರಿನ ಸಂಬಂಧಿಕರಿಗೆ ಮಾತ್ರ ಹಾಗೂ ಮೊದಲ ತಲೆಮಾರಿನ ಸಂಬಂಧಿಕರು ಎಂಬ ಬಗ್ಗೆ ಛಾಪಾ ಖಾಗದದಲ್ಲಿ ಧೃಢೀಕರಿಸಿಕೊಡತಕ್ಕದ್ದು) ₹15,000 ₹2,500 ₹1,250 ₹1,500 ₹19,750 ₹478 ₹20,228
4 ಸಾರ್ವಜನಿಕರಿಗೆ ₹20,000 ₹2,500 ₹1,250 ₹1,500 ₹24,750 ₹599 ₹25,349

ಪೊಲೀಸ್ ಭವನದ ಸ್ಥಳ / Location

ಷರತ್ತುಗಳು ಮತ್ತು ನಿಬಂಧನೆಗಳು / T & C

ಪೊಲೀಸ್ ಭವನವನ್ನು ಬಾಡಿಗೆ ಪಡೆಯಲು ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿದ್ದು, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು. 

ಪೊಲೀಸ್ ಭವನದ ಬಾಡಿಗೆಯನ್ನು ಕಡ್ಡಾಯವಾಗಿ ಆನ್‍ಲೈನ್ ಮುಖಾಂತರ ಪೊಲೀಸ್ ಕಲ್ಯಾಣ ನಿಧಿಯ ಖಾತೆ ಸಂಖ್ಯೆಗೆ ಜಮಾ ಮಾಡುವುದು. ನಗದು ರೂಪದಲ್ಲಿ ಬಾಡಿಗೆಯನ್ನು ಪಾವತಿಸಲು ಅವಕಾಶವಿರುವುದಿಲ್ಲ.

ಆನ್ಲೈನ್ ಬುಕಿಂಗ್ ಶೂಲ್ಕವು, ಪ್ರೊಸೆಸಿಂಗ್ ಮೊತ್ತವನ್ನು ಒಳಗೊಂಡಿರುತ್ತದೆ. ಒಂದು ವೇಳೆ ಅರ್ಜಿದಾರರು ಮರುಪಾವತಿ ಬಯಸಿದಲ್ಲಿ ಪ್ರೊಸೆಸಿಂಗ್ ಮೊತ್ತವನ್ನು ಹಿಂದಿರುಗಿಸಲಾಗುವುದಿಲ್ಲ.

ಪೊಲೀಸ್ ಭವನವನ್ನು ಬಾಡಿಗೆ ಪಡೆಯುವವರು ಪೊಲೀಸ್ ಭವನವನ್ನು ಸ್ವಾಧೀನಕ್ಕೆ ತೆಗೆದುಕೊಂಡು ಖಾಲಿ ಮಾಡುವವರೆಗೆ ಉಪಯೋಗಿಸಿರುವ ವಿದ್ಯುತ್ ಬಿಲ್ಲು ಮತ್ತು ಎ.ಸಿ ಬಿಲ್ಲನ್ನು ಪಾವತಿಸತಕ್ಕದ್ದು.

ಬಾಡಿಗೆ ಪಡೆಯುವವರ ಒಡವೆ ಮತ್ತು ಇನ್ನಿತರೆ ಬೆಲೆಬಾಳುವ ವಸ್ತುಗಳಿಗೆ ಅವರೇ ಜವಾಬ್ದಾರರು.

ಪೊಲೀಸ್ ಭವನವನ್ನು ಬಾಡಿಗೆಗೆ ಪಡೆಯುವವರು ಸ್ವಾಧೀನಕ್ಕೆ ತೆಗೆದುಕೊಂಡು ಖಾಲಿ ಮಾಡುವವರೆಗೂ ಸಾಮಾನು ಸರಬರಾಜು ಹಾಗೂ ವಾಹನಗಳ ಉಸ್ತುವಾರಿಯನ್ನು ಅವರೇ ನೋಡಿಕೊಳ್ಳತಕ್ಕದ್ದು.

ಪೊಲೀಸ್ ಭವನದ ಯಾವುದೇ ಜಾಗದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಡಿವೈಎಸ್‍ಪಿ, ಡಿಎಆರ್, ರಾಮನಗರ ರವರ ಗಮನಕ್ಕೆ ತರುವುದು.

ನಾದಸ್ವರ, ಧ್ವನಿವರ್ಧಕ ಹಾಗೂ ವಾದ್ಯಗೋಷ್ಠಿಗಳನ್ನು ಅತೀ ಕಡಿಮೆ ಧ್ವನಿಯಲ್ಲಿ ಕಟ್ಟಡದ ಒಳಗೆ ಮಾತ್ರ ಕೇಳಿಸುವಂತೆ ಉಪಯೋಗಿಸಬೇಕು. ಹಾಗೂ ಇವುಗಳನ್ನು ರಾತ್ರಿ 09.00 ಗಂಟೆಯಿಂದ ಬೆಳಿಗ್ಗೆ 06.00 ಗಂಟೆಯವರೆಗೆ ನಿಷೇದಿಸಲಾಗಿದೆ.

ಯಾವುದೇ ಕಾರಣಕ್ಕಾಗಲಿ ವಿದ್ಯುಚ್ಛಕ್ತಿ ಅಥವಾ ನೀರು ಸರಬರಾಜು ನಿಂತಲ್ಲಿ ಇಲಾಖೆ ಜವಾಬ್ದಾರರಲ್ಲ. ಕಾರಣಾಂತರದಿಂದ ವಿದ್ಯುಚ್ಛಕ್ತಿ ಅಡಚಣೆ ಉಂಟಾದಲ್ಲಿ ಸಹಕರಿಸಬೇಕು.

ಜನರೇಟರ್ ನಡೆಯುವ ಸಂದರ್ಭದಲ್ಲಿ ಅಗತ್ಯ ಸ್ಥಳಗಳಲ್ಲಿ  ಮಾತ್ರ ದೀಪದ ವ್ಯವಸ್ಥೆ ಇರುತ್ತದೆ.

ಪೊಲೀಸ್ ಭವನವನ್ನು ಸಸ್ಯಾಹಾರ ಕಾರ್ಯಕ್ರಮಗಳಗೆ ಮಾತ್ರ ಬಾಡಿಗೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಮಾಂಸಾಹಾರ ಕಾರ್ಯಕ್ರಮಕ್ಕೆ ಅವಕಾಶವಿರುವುದಿಲ್ಲ.

ಆವರಣದಲ್ಲಿ ಮಾಂಸಾಹಾರ, ಮಧ್ಯಪಾನ ಹಾಗೂ ಜೂಜುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.

ಪೊಲೀಸ್ ಭವನದ ಯಾವುದೇ ಭಾಗಕ್ಕೆ (ಆಸ್ತಿಗೆ) ಹಾನಿಯುಂಟುಮಾಡಿದಲ್ಲಿ ಅದಕ್ಕೆ ಆಗಬಹುದಾದ ನಷ್ಟವನ್ನು ಬಾಡಿಗೆ ಪಡೆದವರೇ ಭರಿಸತಕ್ಕದ್ದು.

ನಿಗಧಿಪಡಿಸಿದ ದಿನಾಂಕದಂದು ಕಾರ್ಯಕ್ರಮಗಳು ಕಾರಣಾಂತರದಿಂದ ನಿಂತಲ್ಲಿ ಹಣವನ್ನು ವಾಪಸ್ ನೀಡುವುದಿಲ್ಲ.

ಅಡುಗೆಗೆ ಬೇಕಾದ ಯಾವುದೇ ಪಾತ್ರೆ, ಗ್ಯಾಸ್ ಅಥವಾ ಇತರೆ ಸಾಮಾನುಗಳು ಪೊಲೀಸ್ ಭವನದಲ್ಲಿ ಲಭ್ಯವಿರುವುದಿಲ್ಲ. ಬಾಡಿಗೆದಾರರು ತಮ್ಮ ಅವಶ್ಯಕತೆಗನುಗುಣವಾಗಿ ಹೊರಗಿನಿಂದ ತರತಕ್ಕದ್ದು.

ಕಾರ್ಯಕ್ರಮಗಳಲ್ಲಿ ಶಾಸ್ತ್ರ ಸಂಪ್ರದಾಯಗಳಿಗೆ ಬೇಕಾದಂತಹ ಎಲ್ಲಾ ಅಗತ್ಯ ವಸ್ತುಗಳನ್ನು ಬಾಡಿಗೆದಾರರೇ ತರತಕ್ಕದ್ದು, ಪೊಲೀಸ್ ಭವನದಲ್ಲಿ ಅಂತಹ ವಸ್ತುಗಳು ಲಭ್ಯವಿರುವುದಿಲ್ಲ.

ಪೊಲೀಸ್ ಭವನವನ್ನು ಬಾಡಿಗೆ ನೀಡುವ ಮೊದಲು ಅಡುಗೆ ಮನೆ, ಊಟದ ಹಾಲ್, ಸಭಾಂಗಣ, ಸ್ನಾನ ಗೃಹ ಮತ್ತು ಶೌಚಾಲಯಗಳ ಸ್ವಚ್ಛತೆಯನ್ನು ಕಾಪಾಡುವುದು.

ಪೊಲೀಸ್ ಭವನವನ್ನು  ಬಾಡಿಗೆ ಪಡೆಯುವವರು ಪೊಲೀಸ್ ಭವನ ಕಟ್ಟಡ,  ಸಾಮಾನು, ಇತರೆ ವಸ್ತುಗಳನ್ನು ಹಾನಿ ಮಾಡಬಾರದು. ಈ ಸಂಬಂಧ ಮುಂಗಡವಾಗಿ ರೂ.5,000/- ಗಳ ಠೇವಣಿ ಇರಿಸತಕ್ಕದ್ದು. ಪೊಲೀಸ್ ಭವನದಲ್ಲಿ ಯಾವುದೇ  ಹಾನಿಪಡಿಸಿದಲ್ಲಿ ಹಾನಿಯುಂಟು ಮಾಡಿರುವ ನಷ್ಟದ  ಮೊತ್ತವನ್ನು ಸದರಿ ಮೊತ್ತದಲ್ಲಿ ಕಡಿತಗೊಳಿಸಿಕೊಳ್ಳಲಾಗುವುದು. ನಷ್ಟದ ಮೊತ್ತವು ರೂ.5,000/- ಗಳಿಗಿಂತ ಹೆಚ್ಚಾದಲ್ಲಿ ಬಾಡಿಗೆದಾರರು ಪಾವತಿಸತಕ್ಕದ್ದು. ಯಾವುದೇ ಹಾನಿಯುಂಟಾಗದಿದ್ದಲ್ಲಿ ಸದರಿ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು.