ಪೊಲೀಸ್ ಭವನವನ್ನು ಬಾಡಿಗೆ ಪಡೆಯಲು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿದ್ದು, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು.
ಪೊಲೀಸ್ ಭವನದ ಬಾಡಿಗೆಯನ್ನು ಕಡ್ಡಾಯವಾಗಿ ಆನ್ಲೈನ್ ಮುಖಾಂತರ ಪೊಲೀಸ್ ಕಲ್ಯಾಣ ನಿಧಿಯ ಖಾತೆ ಸಂಖ್ಯೆಗೆ ಜಮಾ ಮಾಡುವುದು. ನಗದು ರೂಪದಲ್ಲಿ ಬಾಡಿಗೆಯನ್ನು ಪಾವತಿಸಲು ಅವಕಾಶವಿರುವುದಿಲ್ಲ.
ಆನ್ಲೈನ್ ಬುಕಿಂಗ್ ಶೂಲ್ಕವು, ಪ್ರೊಸೆಸಿಂಗ್ ಮೊತ್ತವನ್ನು ಒಳಗೊಂಡಿರುತ್ತದೆ. ಒಂದು ವೇಳೆ ಅರ್ಜಿದಾರರು ಮರುಪಾವತಿ ಬಯಸಿದಲ್ಲಿ ಪ್ರೊಸೆಸಿಂಗ್ ಮೊತ್ತವನ್ನು ಹಿಂದಿರುಗಿಸಲಾಗುವುದಿಲ್ಲ.
ಪೊಲೀಸ್ ಭವನವನ್ನು ಬಾಡಿಗೆ ಪಡೆಯುವವರು ಪೊಲೀಸ್ ಭವನವನ್ನು ಸ್ವಾಧೀನಕ್ಕೆ ತೆಗೆದುಕೊಂಡು ಖಾಲಿ ಮಾಡುವವರೆಗೆ ಉಪಯೋಗಿಸಿರುವ ವಿದ್ಯುತ್ ಬಿಲ್ಲು ಮತ್ತು ಎ.ಸಿ ಬಿಲ್ಲನ್ನು ಪಾವತಿಸತಕ್ಕದ್ದು.
ಬಾಡಿಗೆ ಪಡೆಯುವವರ ಒಡವೆ ಮತ್ತು ಇನ್ನಿತರೆ ಬೆಲೆಬಾಳುವ ವಸ್ತುಗಳಿಗೆ ಅವರೇ ಜವಾಬ್ದಾರರು.
ಪೊಲೀಸ್ ಭವನವನ್ನು ಬಾಡಿಗೆಗೆ ಪಡೆಯುವವರು ಸ್ವಾಧೀನಕ್ಕೆ ತೆಗೆದುಕೊಂಡು ಖಾಲಿ ಮಾಡುವವರೆಗೂ ಸಾಮಾನು ಸರಬರಾಜು ಹಾಗೂ ವಾಹನಗಳ ಉಸ್ತುವಾರಿಯನ್ನು ಅವರೇ ನೋಡಿಕೊಳ್ಳತಕ್ಕದ್ದು.
ಪೊಲೀಸ್ ಭವನದ ಯಾವುದೇ ಜಾಗದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಡಿವೈಎಸ್ಪಿ, ಡಿಎಆರ್, ರಾಮನಗರ ರವರ ಗಮನಕ್ಕೆ ತರುವುದು.
ನಾದಸ್ವರ, ಧ್ವನಿವರ್ಧಕ ಹಾಗೂ ವಾದ್ಯಗೋಷ್ಠಿಗಳನ್ನು ಅತೀ ಕಡಿಮೆ ಧ್ವನಿಯಲ್ಲಿ ಕಟ್ಟಡದ ಒಳಗೆ ಮಾತ್ರ ಕೇಳಿಸುವಂತೆ ಉಪಯೋಗಿಸಬೇಕು. ಹಾಗೂ ಇವುಗಳನ್ನು ರಾತ್ರಿ 09.00 ಗಂಟೆಯಿಂದ ಬೆಳಿಗ್ಗೆ 06.00 ಗಂಟೆಯವರೆಗೆ ನಿಷೇದಿಸಲಾಗಿದೆ.
ಯಾವುದೇ ಕಾರಣಕ್ಕಾಗಲಿ ವಿದ್ಯುಚ್ಛಕ್ತಿ ಅಥವಾ ನೀರು ಸರಬರಾಜು ನಿಂತಲ್ಲಿ ಇಲಾಖೆ ಜವಾಬ್ದಾರರಲ್ಲ. ಕಾರಣಾಂತರದಿಂದ ವಿದ್ಯುಚ್ಛಕ್ತಿ ಅಡಚಣೆ ಉಂಟಾದಲ್ಲಿ ಸಹಕರಿಸಬೇಕು.
ಜನರೇಟರ್ ನಡೆಯುವ ಸಂದರ್ಭದಲ್ಲಿ ಅಗತ್ಯ ಸ್ಥಳಗಳಲ್ಲಿ ಮಾತ್ರ ದೀಪದ ವ್ಯವಸ್ಥೆ ಇರುತ್ತದೆ.
ಪೊಲೀಸ್ ಭವನವನ್ನು ಸಸ್ಯಾಹಾರ ಕಾರ್ಯಕ್ರಮಗಳಗೆ ಮಾತ್ರ ಬಾಡಿಗೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಮಾಂಸಾಹಾರ ಕಾರ್ಯಕ್ರಮಕ್ಕೆ ಅವಕಾಶವಿರುವುದಿಲ್ಲ.
ಆವರಣದಲ್ಲಿ ಮಾಂಸಾಹಾರ, ಮಧ್ಯಪಾನ ಹಾಗೂ ಜೂಜುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.
ಪೊಲೀಸ್ ಭವನದ ಯಾವುದೇ ಭಾಗಕ್ಕೆ (ಆಸ್ತಿಗೆ) ಹಾನಿಯುಂಟುಮಾಡಿದಲ್ಲಿ ಅದಕ್ಕೆ ಆಗಬಹುದಾದ ನಷ್ಟವನ್ನು ಬಾಡಿಗೆ ಪಡೆದವರೇ ಭರಿಸತಕ್ಕದ್ದು.
ನಿಗಧಿಪಡಿಸಿದ ದಿನಾಂಕದಂದು ಕಾರ್ಯಕ್ರಮಗಳು ಕಾರಣಾಂತರದಿಂದ ನಿಂತಲ್ಲಿ ಹಣವನ್ನು ವಾಪಸ್ ನೀಡುವುದಿಲ್ಲ.
ಅಡುಗೆಗೆ ಬೇಕಾದ ಯಾವುದೇ ಪಾತ್ರೆ, ಗ್ಯಾಸ್ ಅಥವಾ ಇತರೆ ಸಾಮಾನುಗಳು ಪೊಲೀಸ್ ಭವನದಲ್ಲಿ ಲಭ್ಯವಿರುವುದಿಲ್ಲ. ಬಾಡಿಗೆದಾರರು ತಮ್ಮ ಅವಶ್ಯಕತೆಗನುಗುಣವಾಗಿ ಹೊರಗಿನಿಂದ ತರತಕ್ಕದ್ದು.
ಕಾರ್ಯಕ್ರಮಗಳಲ್ಲಿ ಶಾಸ್ತ್ರ ಸಂಪ್ರದಾಯಗಳಿಗೆ ಬೇಕಾದಂತಹ ಎಲ್ಲಾ ಅಗತ್ಯ ವಸ್ತುಗಳನ್ನು ಬಾಡಿಗೆದಾರರೇ ತರತಕ್ಕದ್ದು, ಪೊಲೀಸ್ ಭವನದಲ್ಲಿ ಅಂತಹ ವಸ್ತುಗಳು ಲಭ್ಯವಿರುವುದಿಲ್ಲ.
ಪೊಲೀಸ್ ಭವನವನ್ನು ಬಾಡಿಗೆ ನೀಡುವ ಮೊದಲು ಅಡುಗೆ ಮನೆ, ಊಟದ ಹಾಲ್, ಸಭಾಂಗಣ, ಸ್ನಾನ ಗೃಹ ಮತ್ತು ಶೌಚಾಲಯಗಳ ಸ್ವಚ್ಛತೆಯನ್ನು ಕಾಪಾಡುವುದು.
ಪೊಲೀಸ್ ಭವನವನ್ನು ಬಾಡಿಗೆ ಪಡೆಯುವವರು ಪೊಲೀಸ್ ಭವನ ಕಟ್ಟಡ, ಸಾಮಾನು, ಇತರೆ ವಸ್ತುಗಳನ್ನು ಹಾನಿ ಮಾಡಬಾರದು. ಈ ಸಂಬಂಧ ಮುಂಗಡವಾಗಿ ರೂ.5,000/- ಗಳ ಠೇವಣಿ ಇರಿಸತಕ್ಕದ್ದು. ಪೊಲೀಸ್ ಭವನದಲ್ಲಿ ಯಾವುದೇ ಹಾನಿಪಡಿಸಿದಲ್ಲಿ ಹಾನಿಯುಂಟು ಮಾಡಿರುವ ನಷ್ಟದ ಮೊತ್ತವನ್ನು ಸದರಿ ಮೊತ್ತದಲ್ಲಿ ಕಡಿತಗೊಳಿಸಿಕೊಳ್ಳಲಾಗುವುದು. ನಷ್ಟದ ಮೊತ್ತವು ರೂ.5,000/- ಗಳಿಗಿಂತ ಹೆಚ್ಚಾದಲ್ಲಿ ಬಾಡಿಗೆದಾರರು ಪಾವತಿಸತಕ್ಕದ್ದು. ಯಾವುದೇ ಹಾನಿಯುಂಟಾಗದಿದ್ದಲ್ಲಿ ಸದರಿ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು.